ಸಹೃದಯ ಬೆಂಗಳೂರಿಗರೇ,
ನಿಮಗೆ ಈ ಅನುಭವ ಆಗಿದೆಯಾ? ನೀವು ಪ್ರಯಾಣ ಮಾಡಲು ಆಟೋರಿಕ್ಷಾ ಹತ್ತುತ್ತೀರ, ನೀವು ಮೂರು ಜನರಿದ್ದೀರಾ, ನಿಮ್ಮ ಬಳಿ ಲಗೇಜ್ ಇದೆ. ನೀವು ಕೂತು ಲಗೇಜ್ ಇಡಲು ನೋಡುತ್ತೀರಾ. ಆದರೆ ಜಾಗವೇ ಇಲ್ಲ! ತೀರಾ ಇಕ್ಕಟ್ಟು!! ಲಗೇಜ್ ಬಿಡಿ, ನಿಮ್ಮ ಕಾಲು ಮುಂದೆ ಚಾಚಲು ಸ್ಥಳವಿಲ್ಲ. "ಗರುಡಾಸನ" ಸ್ಥಿತಿಯಲ್ಲಿ ಕಾಲುಗಳ್ಳನ್ನು ಮಡಚಿದರೆ ಆಗ ಸ್ವಲ್ಪ ಜಾಗ ಸಿಗಬಹದು ನೋಡಿ. (ಚಿತ್ರ 1). ಎಲ್ಲ ಆಟೋರಿಕ್ಷಾಗಳು ಹೀಗಿಲ್ಲ. ಕಾಲು ಚಾಚಲು ಅವಕಾಶವಿರುವ ಆಟೋಗಳು ಬಾಡಿಗೆ ಸಿಗುತ್ತವೆ. (ಚಿತ್ರ 2)
ನೀವು ಗಮನಿಸಿ ನೋಡಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಆಟೋರಿಕ್ಷಾಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು, ಕಾಲುಚಾಚಲೆಂದು ಸಾಕಷ್ಟು ಸ್ಥಳಾವಕಾಶ ಉತ್ಪಾದಕ ಕೊಟ್ಟಿರುತ್ತಾನೆ. ಆದರೆ ವಿಪರ್ಯಾಸವೆಂದರೆ ಅಧಿಕ ಸ್ಥಳಾವಕಾಶ ಸದುಪಯೋಗವಾಗದಂತೆ ಆಟೋಗಳಲ್ಲಿ ಸುಮಾರು ಒಂದು ಇಂಚು ದಪ್ಪ ರಬ್ಬರ ಹಾಳೆ/ಚಾಪೆ ಹಾಸಿರುತ್ತಾರೆ. ಇದು ಕೇವಲ ಕೆಳ ಭಾಗವನ್ನಲ್ಲದೆ, ಮುಂದಿನ ಭಾಗವನ್ನು ಆಕ್ರಮಿಸಿರುತ್ತದೆ. ಕೆಳಗಡೆ ಹಾಸುವದರಲ್ಲಿ ಅರ್ಥವಿದೆ. ಲೋಹದ ತಳವನ್ನು ರಕ್ಷಿಸುತ್ತದೆ. ಆದರೆ ಮುಂದೆ ಪ್ಯಾರಪೆಟ್ ಗೋಡೆ ತರಹ ಎರಡು-ಮೂರು ಅಡಿ ಎತ್ತರ ಹಾಸಿದರೆ ಏನು ಪ್ರಯೋಜನ? ಪ್ರಯಾಣಿಕರಿಗೆ ಅನಾನುಕೂಲವಾಗುವಂತೆ ದಪ್ಪ ರಬ್ಬರ್ ಹಾಳೆ/ಚಾಪೆ ಹಾಕುವುದು ಸಮಂಜಸವೇ?
ಗೂಡ್ಸ್ ಆಟೋ ರಿಕ್ಷಾಗಳಿಗೆ ಈ ರೀತಿಯಾದ ದಪ್ಪ ರಬ್ಬರ್ ಹಾಳೆ/ಚಾಪೆ ಹಾಕುವುದರಲ್ಲಿ ಅರ್ಥವಿದೆ! ಅದು ಸರಕು ಸರಂಜಾಮುಗಳನ್ನು ಸಾಗಿಸುವಾಗ ಆಗುವ ಹಾನಿಯಿಂದ ರಕ್ಷಿಸುತ್ತದೆ. ಆದರೆ ಇಷ್ಟು ದಪ್ಪ ರಬ್ಬುರ್ ಹಾಳೆ ಪ್ರಯಾಣಿಕರ ಆಟೋಗಳಿಗೆ ಏಕೆ? ಈ ರೀತಿಯ ಪ್ರಯಾಣ, ಪ್ರಯಾಣಿಕರಿಗೆ ತ್ರಾಸದಾಯಕವಲ್ಲವೇ? ಆಟೋ ಸಾರಥಿಗಳೆ ಒಮ್ಮೆ ಯೋಚಿಸಿನೋಡಿ!
ಇದರ ವಿಚಾರವಾಗಿ ಸರ್ಕಾರವು ಆಟೋ ರಿಕ್ಷಾ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ನೀಡಬಹುದೆ?
ಗ್ರೇಟರ್ ಬೆಂಗಳೂರಿನತ್ತ ಒಂದು ಪುಟ್ಟ ಹೆಜ್ಜೆ 👍
No comments:
Post a Comment